Breaking News

ಬೆಂಗಳೂರಿನಲ್ಲಿ ಯಾಕೆ ವೋಟಿಂಗ್ ಕಡಿಮೆ ಆಗಿದೆ...?


ಬೆಂಗಳೂರಿನಲ್ಲಿ ಯಾಕೆ ವೋಟಿಂಗ್ ಕಡಿಮೆ ಆಗಿದೆ...?

ಬೆಂಗಳೂರಿನಲ್ಲಿ 30% ವೋಟ್ ಆಗಿದೆ,
ನಾಚಿಕೆ ಆಗಬೇಕು ಬೆಂಗಳೂರಿನ ಜನತೆಗೆ ಅಂತ ದಿನ ಪೂರ್ತಿ ನ್ಯೂಸ್ ಚಾನೆಲ್ ಗಳು ಹಾಕೊಂಡು ಹಿಟ್ಟು ರುಬ್ಬಿದ ಹಾಗೆ ರುಬ್ಬುತರಲ್ಲ  ಸಾರ್ .

ನೋಡಿ ಸಾರ್ ನನ್ನ ಅಭಿಪ್ರಾಯದಲ್ಲಿ ನನಗೆ ಅನಿಸಿರುವುದನ್ನು ನಾನು ಇಲ್ಲಿ ಬರೆದಿದ್ದೇನೆ.
ಸರಿನಾ... ತಪ್ಪಾ ....ಅಂತ ನನಗೂ ತಿಳಿಯುವಂತೆ ಹೇಳಿ ಸಾರ್. 
ಬೆಂಗಳೂರು ಅನ್ನುವುದು ದೊಡ್ಡ ಸಮುದ್ರದತರ ಅಲ್ಲಿ  ಆರ್ಹ್ವ ವ್ಯಕ್ತಿಗಳು ಯರಬೇಕಾದ್ರು ಕೆಲಸ ಅರಸಿ ಬರಬಹುದು, ಆಗಿಲ್ಲ ಅಂದರೆ ತಮ್ಮ ಊರಿಗೆ ಹೋಗಬಹುದು.

ಬೆಂಗಳೂರಿ ನಲ್ಲಿ ಸಾಕಷ್ಟು ಮಂದಿ ಬೇರೆ ರಾಜ್ಯದವರೆ ಇರುವಂಥ ದನ್ನು ನಾವು ನೋಡಬಹುದು ಅವರ ವಿಚಾರ ಬಿಟ್ಟು ಬಿಡಿ.

ನಮ್ಮ ರಾಜ್ಯದಲ್ಲೇ ಇದ್ದವರು ಬೇರೆ ಬೇರೆ ಜಿಲ್ಲೆಯಿಂದ ಬೆಂಗಳೂರಿನಲ್ಲಿ  ಕೆಲಸ ಅರಸಿ ಬಂದವರು  ಸಾಕಷ್ಟು ವರ್ಷ
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದವರು ಬೆಂಗಳೂರಿನಲ್ಲಿ ವೋಟರ್ ಐಡಿ ಮಾಡಿಸಿರುತ್ತಾರೆ. ಅವರು ಅನಿವಾರ್ಯ ಕಾರಣದಿಂದನೋ ಅಥವಾ ತಮ್ಮ ಸ್ವಂತ ಊರಿನಲ್ಲಿ ಹೊಸ ಕಂಪನಿ ತೆರೆದಿದೆಎಂದೋ ಬೆಂಗಳೂರನ್ನು ಬಿಟ್ಟು ಅವರ ಸ್ವಂತ ಊರಿಗೆ ಹೋಗಿದ್ದರೆ, 
ಬೆಂಗಳೂರಿನಲ್ಲಿ ಇರುವಂತಹ ವೋಟರ್ ಐಡಿ ಹಾಗೆ ಇರುತ್ತದೆ ಅದು ಡಿಲೀಟ್ ಆಗಿರುವುದಿಲ್ಲ. ಅಲ್ಲಿಗೆ ಆ ವೋಟ್ ಹಾಕುವುದು ಯಾರು...?

ಹಾಗೂ ಅನಿರೀಕ್ಷಿತ ಸಾವು ಆದವರ ವೋಟರ್ ಐಡಿ ಕೆಲವೊಂದು ಡಿಲೀಟ್ ಆಗದೆ ಇರುವುದರಿಂದ,  ಈ ಶೇಕಡ ವೋಟಿಂಗ್ ಕಡಿಮೆಯಾಗಿರಬಹುದು. 
ಹೀಗೆ  ಹತ್ತು ಹಲವಾರು ಸಮಸ್ಯೆ ಇರುವುದರಿಂದ ಬೆಂಗಳೂರಿನಲ್ಲಿ ವೋಟಿಂಗ್ ಕಡಿಮೆ ಆಗಿದೆ ಅನ್ನುವಂತದ್ದು
ನನ್ನ ಅನಿಸಿಕೆ ಆಗಿದೆ.

ಅದರಿಂದ ಇಂತಹ ವೋಟರ್ ಐಡಿ ಗಳನ್ನು ಡಿಲೀಟ್ ಮಾಡಿ ಹೊಸ ಪಟ್ಟಿಯನ್ನು ತಯಾರಿಸಿದ್ದೆ ಅದಲ್ಲಿ  ಸರಿಯಾದ ಲೆಕ್ಕಾಚಾರಗಳು ಸಿಗಬಹುದು ಅನ್ನುವುದು ನನ್ನ ಅನಿಸಿಕೆ.

ಧನ್ಯವಾದಗಳು...
ರಾಜೇಂದ್ರ ಎ
  

No comments